ಸೂಚನೆ: ದೇಹದೊಳಗೆ ಆತ್ಮ ಇದ್ದಾಗ “ಮನುಷ್ಯ” ಅಂತ ಕರ್ದು ಗೌರವ ಕೊಡೋ ನಾವು, ಆತ್ಮ ದೇಹ ಬಿಟ್ ಹೋದ್ ತಕ್ಷಣ ಆದ್ನ “ದೆವ್ವೆ” ಅಂದು, ಅದ್ನ ವಸ್ತು ತರ ಅದು..ಇದು.. ಅಂತೀವಿ. ನಂಗೆ ಅದು ಸರಿ ಅನ್ನಿಸಲ್ಲಿಲ್ಲ. ಅದಕ್ಕೆ ಒಬ್ಬ ಮನುಷ್ಯನಿಗೆ ನಾವು ಬಳಸುವ ಸಂಭೋಧನೆಗಳನ್ನ ಆತ್ಮಕ್ಕೂ ಬಳಸಿದ್ದೀನಿ. ನಿಮಗೆ ಅದು ತಪ್ಪೆನಿಸಿದಲ್ಲಿ ಕ್ಷಮಿಸಿ.
ಈ ಕಥೆ ಕೇವಲ ಕಾಲ್ಪನಿಕ ಅಷ್ಟೆ. ಅಕಸ್ಮಾತ್ ನೀವು ಆತ್ಮಗಳನ್ನ ನೋಡಿದ್ರೆ ಅಥವ ಧೈರ್ಯ ಮಾಡಿ ಆತ್ಮಗಳ ಜೊತೆ ಮಾತಾಡಿದ್ರೆ ದಯವಿಟ್ಟು ನಿಮ್ experience ಹೇಗಿತ್ತು ತಿಳಿಸಿ.
ನಮ್ ಮನೆ ಅಕ್ ಪಕ್ಕದ್ ಜನ ಸಿಕ್ಕಾಪಟ್ಟೆ ಕೂಗಾಡ್ತಾರ್ರಿ. ಅದ್ರಲ್ಲೂ ರಾತ್ರಿ ಹೊತ್ತು ಎಣ್ಣೆ ಹೊಡದ್ಮೇಲೆ ಕೂಗಾಡೋದ್ ಜಾಸ್ತಿ. ನನ್ ರೂಮ್ನ ಕಿಟ್ಕಿ ಪಕ್ದಲ್ಲೇ ನನ್ ಮಂಚ ಇರೊದ್ರಿಂದ ಅಕ್ ಪಕ್ದ ಮನೇವ್ರು ಯಾರೇ ಏನೇ sound ಮಾಡಿದ್ರು ನನ್ ರೂಮ್ನಲ್ ಕೇಳುತ್ತೆ. ಅಪ್ಪ ಅಮ್ಮನ್ ಜೊತೆ ಇರೋ ನಾನು, ಅವ್ರು ಮಜಾ ಮಾಡೋದನ್ನ ನೋಡಿ ಉರ್ಕೋಂಡು, ನನ್ ರೂಮ್ನ ಕಿಟ್ಕಿ ಮೂಲ್ಕನೇ ಗಲಾಟೆ ಕಮ್ಮಿ ಮಾಡಿ ಅಂತ ಹೇಳೋದೂ ಮಾಮೂಲಿ. ಆದ್ರೆ ನೆನ್ನೆ….. ಆಗಿದ್ದೇ ಬೇರೆ….
ನೆನ್ನೆ ರಾತ್ರಿ routine ಆಗಿ ನಾನು ಒಂದ್ book ಓದ್ತಾ ಕೂತಿದ್ದೆ. ಸುಮಾರು 1 ಗಂಟೆ ಇರ್ಬೋದು, ಯಾರೋ ಅಣ್ಣಾವ್ರ “ಬಾನಿಗೊಂದು ಎಲ್ಲೆ ಎಲ್ಲಿದೆ…..” ಹಾಡ್ನ ಜೋರಾಗ್ ಹಾಡಕ್ ಶುರು ಮಾಡಿದ್ರು.
(ಕಥೆನ conversation style ನಲ್ ಹೇಳ್ತೀನಿ ಸ್ವಲ್ಪ adjust ಮಾಡ್ಕೊಳ್ಳಿ)
ನಾನು: ದಿನಾ ಹೇಳ್ಬೇಕಾ ನಿಮ್ಗೆಲ್ಲಾ, ಮೆತ್ತಿಗ್ ಹಾಡ್ರಿ.
ಆತ: Sorry sir, ನನ್ voice ನಿಮ್ಗೆ ಕೇಳ್ಸುತ್ತೆ ಅನ್ಕೋಳ್ಳಿಲ್ಲ.
ನಾನು: ಅಲ್ರೀ, ಇಷ್ಟ್ ಜೋರಾಗ್ ಹಾಡ್ತಿದೀರ, “ಕೇಳ್ಸುತ್ತೆ ಅನ್ಕೋಳ್ಳಿಲ್ಲ” ಅಂತೀರಲ್ರೀ.
ಆತ: ಅದೂ, ನಮ್ voice ಎಲ್ರಿಗೂ ಕೇಳಲ್ಲ ನೋಡೀ, ಅದ್ಕೇ ಹಾಗಂದೆ.
ನಾನು (ತಮಾಷೆಯಾಗಿ) : ನೀವ್ ಹೇಳೋದ್ ಕೇಳಿದ್ರೆ ಯಾಕೋ ನೀವ್ ಮನುಷ್ಯರಲ್ಲ doubt ಬರ್ತಿದೀಯಲ್ಲ…
ಆತ: ಹೌದ್, ಸಾರ್ ನಾನು ಆತ್ಮ.. ನಿಮ್ಮಂತೋರು generalಆಗ್ ನಮ್ನ “ದೆವ್ಗಳೂ” ಕರೀತಾರೆ.
ಆದ್ರೆ ನೀವೇನು ಹೆದರ್ಬೇಡಿ, ನಿಮ್ಗೇನು ತೊಂದ್ರೆ ಕೋಡಲ್ಲ.
ಸಾರ್, if you don’t mind ನಿಮ್ ಜೊತೆ ಮಾತಾಡ್ಬೋದ? ನಮ್ಗೆ ಮಾತಾಡಕ್ ಜನ ಸಿಗೋದೆ ಕಷ್ಟ ನೋಡಿ ಅದ್ಕೇ ಕೇಳ್ದೆ.
(ನಾನು ಸ್ವಲ್ಪ ಯೋಚ್ನೆ ಮಾಡ್ದೆ, ದೆವ್ವದ್ ಜೊತೆ ಮಾತಾಡೋದು riskಏ, but experience ಸಖತಾಗಿರುತ್ತೆ ಅಂತೆ decide ಮಾಡ್ದೆ.)
ನಾನು: ಸರಿ, ಮಾತಾಡಣ
ಆತ: ಸಾರ್, ಇನ್ನೋಂದ್ request ನಿಮ್ಗೆ ಕಾಣಿಸ್ಕೋಬೋದ? ಮಾತಾಡಕ್ comfortable ಆಗಿರುತ್ತೆ.
(ದೆವ್ವದ್ ಜೊತೆ ಮಾತಾಡೊ riskಏ ತೊಗೊಂಡಾಯ್ತು, ದೆವ್ವಾನ ನೋಡೇಬಿಡೂಣ ಅಂತ decide ಮಾಡ್ದೆ)
ನಾನು: ಸರಿ, ಅದೂ ಆಗೇ ಬಿಡ್ಲಿ….
ಆತ: Thank you Sir…
(ನನ್ ಕಿಟ್ಕಿ ಮುಂದೆ ಬಂದ್ ಕಾಣಿಸ್ಕೋಂಡ ಆತ. ನೋಡಿದ್ರೆ ಆತ ಚಿಕ್ ವೈಸಿಗೆ ticket ತೊಗೊಂಡಂಗಿತ್ತು)
ನಾನು: ನಿಮ್ನ ನೋಡಿದ್ರೆ ಚಿಕ್ ವೈಸ್ಗೆ ticket ತೊಗೊಂಡಂಗಿದೆ.
ಆತ: ಹೂಂ, ಸ್ವಾಮಿ… ನಾನ್ ಸತ್ತಾಗ ನಂಗ್ ಬರೀ 32.
ನಾನು: ಏನಾಯ್ತು?
ಆತ: ಅದೊಂದ್ ದೋಡ್ ಕಥೆ…
ನಾನು: ಪರ್ವಾಗಿಲ್ಲ ಹೇಳಿ. ದೆವ್ವದ್ sorry ಆತ್ಮದ್ ಜೊತೆ first time ಮಾತಾಡ್ತಿರೋದು, ಇನ್ ನಿದ್ದೆ ಬರೋದ್ doubtಏ…. Hmmm ಹೇಳಿ….
ಆತ: ನನ್ ಹೆಸ್ರು ರಾಮ ಅಂತ, ಮಂಡ್ಯ ಹತ್ರ ನಮ್ಮೂರು. ಚಿಕ್ ವೈಸ್ನಿಂದ ನಮ್ ಅತ್ತೆ ಮಗ್ಳನ್ನ ಪ್ರೀತಿಸ್ತಿದ್ದೆ.
ನಾನು: ಅತ್ತೆ ಮಗ್ಳು ಕೈಕೊಟ್ಟು ಬೇರೆ ಯಾರ್ನೋ ಮದ್ವೆ ಆಗಿರ್ಬೇಕು, ಅದ್ಕೆ ನೇಣ್ ಹಾಕೋಂಡಿರ್ತೀರ.
ಆತ: ಇಲ್ಲ ಸಾರ್ ಹಾಗಲ್ಲ… ಕಥೆ full ಹೇಳೋವರ್ಗೂ please ಕೇಳಿಸ್ಕೋಳಿ ಸಾರ್…
ಇನ್ನೊಂದ್ requestಉ ದಯವಿಟ್ಟು ಇನ್ನೊಂದ್ ಸರಿ, ನಾನ್ ಸತ್ತಿದೀನಿ ಅನ್ನೋದನ್ನ ನೆನಪಿಸ್ ಬೇಡಿ.
ನಾನು: ok…, ಸರಿ…. Continue ಮಾಡಿ.
ಆತ: ನಾವಿಬ್ರೂ degreeವರ್ಗೂ ಒಟ್ಗೇ ಓದಿದ್ವೀ, ಅಮೇಲೆ ನಾನು ತೋಟ ನೋಡ್ಕೋಳಕ್ಕೆ ಊರಿಗ್ ಹೋದೆ. ನನ್ ಗೌರಿ ಮುಂದಕ್ ಓದ್ಬೇಕು ಅಂದ್ಲು ಅಂತ ಮನೇವ್ರನ್ನೆಲ್ಲಾ ಒಪ್ಸಿ ಮೈಸೂರಿಗ್ ಕಳ್ಸ್ದೆ.
ನಾನು: ಅಲ್ರೀ ಏನೋ ಹೋಗ್ಲಿ ಪಾಪಂತ ಕಥೆ ಕೇಳಕ್ ಕೂತ್ರೆ ಇಡೀ life historyನೇ ಹೇಳೋತರ ಇದೀರಲ್ಲ.. Storyನ fast forward ಮಾಡೀ.
ಆತ: Sorry… ಬೇಜಾರ್ ಮಾಡ್ಕೋಬೇಡಿ, ನನ್ ಕಥೆ ಕೇಳಕ್ ಅಪ್ರೂಪಕ್ ಒಬ್ರು ಸಿಕ್ರಲ್ಲಾ ಅನ್ನೋ excitementನಲ್ಲಿ full firstಇಂದ start ಮಾಡ್ಬಿಟ್ಟೆ.
ನಾನು: ಹೋಗ್ಲಿ continue ಮಾಡಿ.
ಆತ: ಗೌರಿ, ಮೈಸೂರಿಗ್ ಹೋಗಿ ಕೆಲವು ತಿಂಗ್ಳು ಎಲ್ಲಾ ಸರಿಯಾಗಿತ್ತು, ಅಮೇಲೆ, ಬರ್ತಾ ಬರ್ತಾ ನಮ್ಮಿಬರ್ ಮಧ್ಯೆ distance ಬೆಳೀತಾ ಹೋಯ್ತು. ಕಡೇಗೆ ಅವ್ಳು ನನ್ calls receive ಮಾಡೋದನ್ನ ನಿಲ್ಸಿದ್ಲು.
ಏನೋ ಆಗಿದೆ ಅಂತ ಗಾಬ್ರಿ ಆಯ್ತು. ಮೈಸೂರಿಗ್ ಬಂದೆ….. Sunday ಅವತ್ತು
(ಪರ್ವಾಗಿಲ್ಲ ದೆವ್ವಕ್ಕೆ ವಾರ ಬೇರೆ ಙಾಪಕ ಇದೇಂತ ಮನಸ್ನಲ್ಲೇ ಅಂಕೊಂಡೆ, ಕಥೆ continue ಮಾಡ್ದ ಆತ…)
ಆ…ಹೇಳೋದನ್ನೇ ಮರ್ತಿದ್ದೆ, ನಾನು ಅವ್ಳಿಗೆ ಒಂದ್ ಮನೆ ಬಾಡ್ಗೆಗ್ ಕೂಡ್ಸಿದ್ದೆ, ಬಾಡ್ಗೆನು ನಾನೆ ಕಟ್ತಿದ್ದೆ. So continuing the story, Sunday ಅಲ್ವೆ ಅವತ್ತು, ಅದ್ಕೆ ಮನೇಗೆ ಹೋದೆ. ಹೋಗ್ ಬಾಗಿಲ್ ತಟ್ದೆ, ಯಾರೋ ನನಗ್ ಗೊತ್ತಿಲ್ದಿರೋನು ಬಾಗಿಲ್ ತೆಗೆದ.
ಆಮೇಲ್ ಒಳ್ಗಿಂದ ಬಂದ್ಲು ನನ್ ಗೌರಿ… Huh…. Sorry…. ನನ್ ಗೌರಿ ಅಲ್ಲ ಅವ್ನ ಗೌರಿ. ಅವ್ಳು ನನ್ನ ಬಿಟ್ಟು ಅವ್ನ ಮದ್ವೆ ಆಗುದ್ಲು.
(ಕಥೆ ಹೇಳ್ತಿದ್ದ ಅವ್ನು ಸುಮ್ನಾದ, ನಂಗೂ ಆತನ್ನ disturb ಮಾಡ್ಬೇಕು ಅನ್ನಿಸ್ಲಿಲ್ಲ, ನಾನು ಸುಮ್ನಿದ್ದೆ. ಎರ್ಡು ನಿಮ್ಷ ಆದ್ಮೇಲೆ continue ಮಾಡ್ದ)
ಯಾಕ್ ಹೀಗ್ ಮಾಡಿದ್ಲೂಂತ ಕೇಳ್ದೆ. “ನನ್ ಜೀವ್ನ ನನ್ನಿಷ್ಟ” ಅಂದ್ಲು. ತುಂಬ ಕೋಪ ಬಂತು, ಕೋಪ್ದಲ್ಲಿ ಕಪಾಳಕ್ ಒಂದ್ ಬಿಟ್ಟೆ, ಅವ್ಳು ಅಷ್ಟಕ್ಕೇ ಕುಸಿದ್ ಬಿದ್ಲೂ. ಅವ್ನು ನನ್ ಮೇಲ್ ಜಗಳಕ್ ಬಂದ. ಅವ್ನನ್ನ ಸಾಯೋವರ್ಗು ಹೊಡ್ದೆ.
ಸ್ವಲ್ಪ ಹೊತ್ತಾದ್ಮೆಲೆ ಕೋಪ ಕಮ್ಮಿಯಾಯ್ತು, ನೋಡ್ದ್ರೇ ಇಬ್ರೂ ಸತ್ತಿದ್ರು…. ನಂಗೆ ಏನ್ಮಾಡ್ಬೇಕೂಂತ ತೋಚ್ಲಿಲ್ಲ. Policeಉ, jailಉ, ಶಿಕ್ಷೆ, ಎಲ್ಲಾ ಯೋಚ್ನೆ ಮಾಡಿ ಭಯ ಆಯ್ತು. ಸಾಯೋದೆ better ಅಂತ decide ಮಾಡಿ ಅಲ್ಲೇ ನೇಣ್ ಹಾಕೊಂಡೆ.
(ಕಥೆ ಹೇಳ್ತಿದ್ ಆತನ ಧ್ವನಿಲಿ ದುಖಃ, ಸಂಕ್ಟ ಇತ್ತು. ನಾನು ಕಥೆ ಕೇಳ್ತಾ ಕಥೇಲೆ ಮುಳ್ಗೋಗಿದ್ದೆ. ಆತ ಕಥೆ ಮದ್ಯದಲ್ ನಿಲ್ಸಿದ್ದೇ ಗೊತ್ತಾಗ್ಲಿಲ್ಲ. ಸ್ವಲ್ಪ ಹೊತ್ತಾದ್ ಮೇಲೆ silence realize ಆಯ್ತು. “An Absolute Awkward Silence”. First time ನಿಷ್ಯಬ್ಧವಾದ ವಾತಾವರ್ಣದಲ್ಲಿ ಭಯ ಆಯ್ತು, ಏನೋ ಹೇಳ್ಬೇಕು ಆನ್ನಸ್ತು. ಆದ್ರೇ ಹೇಳಕ್ಕಾಗಿದ್ದು)
ನಾನು: ಆಮೇಲೆ?
ಆತ: ನಮ್ನ ಮೇಲಿನ್ courtಉ ಅಂದ್ರೇ ದೇವ್ರ ಮುಂದೇ produce ಮಾಡಿದ್ರು.
ದೇವ್ರು… ಎಲ್ಲಾ ಗೊತ್ತಿದ್ದು ನನ್ ಹುಡ್ಗಿನ love ಮಾಡಿದ್ ಅವ್ನ, ನಂಗೆ ಮೋಸ ಮಾಡಿದ್ ನನ್ ಹುಡ್ಗಿನ “ನರಕ”ಕ್ ಹಾಕಿದ್ರು. ನಾನ್ ಮಾಡಿದ್ ತಪ್ಪೇ ಆದ್ರು situation consider ಮಾಡಿ, ನಂಗೆ ದಿನ್ದಲ್ 10 hours ಸ್ವರ್ಗ, 4 hours ಸ್ವರ್ಗ ಹಾಗು ನರಕದ ಮಧ್ಯೆ ಇರೋ waiting areaನಲ್ cleaning duty fix ಮಾಡಿ, ಇನ್ ಮಿಕ್ಕಿದ್ 10 hours ಭೂಮಿ ಸುತ್ತಕ್ಕೆ ಬಿಟ್ಟಿದಾರೆ.
ನಾನೂ first ಖುಷಿ ಪಟ್ಟೆ ನರಕ ತಪ್ತೂಂತ. ಆದ್ರೆ ಇದೂ ಒಂತರ ನರಕನೇ. ನಾವು ಸ್ವಲ್ಪ ಜನಕ್ಕೆ ಬಿಟ್ರೆ ಯಾರ್ಗೂ ಕಾಣಲ್ಲ , ಯಾರ್ಗೂ ಕೇಳ್ಸಲ್ಲ, ಸುಮ್ನೆ ಜನಾನ್ ನೋಡ್ಕೋಡು ಹಾರಾಡ್ತಿರ ಬೇಕು…….
ಈಗ ಅನ್ಸುತ್ತೆ ಸಾರ್ ಆ ಕ್ಷಣ ಸ್ವಲ್ಪ ಕೋಪ control ಮಾಡಿದ್ರೆ ಎಷ್ಟೋ ಚನಾಗಿರ್ತಿತ್ತು.
(ನಾನೂ ಹೌದು ಅನ್ನೋ ರೀತಿಲಿ ತಲೆ ಆಡಿಸ್ದೆ. ಆತನ ಕಥೆ ಕೇಳಿದ್ ನಂಗೆ ಏನ್ ಹೇಳ್ಬೇಕು ಅಂತ ಗೂತ್ತಾಗ್ಲಿಲ್ಲ. ಅಷ್ಟರಲ್ಲಿ ಹಕ್ಕಿಗಳ ಚಿಲಿಪಿಲಿ ನಾದ ಕೇಳಿಸಕ್ ಶುರು ಆಯ್ತು. )
ಆತ: ನಾನ್ ಹೊರ್ಡೊ time ಆಯ್ತು. ನಾನಿನ್ ಹೊರ್ಡ್ತೀನಿ ಸಾರ್. ನನ್ ಕಥೆನ ಪೂರ್ತಿ ಕೇಳಿದ್ದಕ್ಕೆ ತುಂಬ thanks. ನಿಮ್ ನಿದ್ದೆ ಕೆಡಿಸ್ದೆ sorry.
ಅಂತ ಹೇಳಿ ಮಾಯ ಆದ ಆತ.
ನಾನು ಯೋಚ್ನೆ ಮಾಡ್ದೆ, ಅನ್ನಿಸ್ತು ನಾವು ಎಷ್ಟೋ ಸರಿ ಕೋಪದ್ದಲ್ಲಿ ನಮ್ಮ ಜೀವನದಲ್ಲಿ ಆಗ್ಬೋದಾದ ಒಳ್ಳೇದನ್ನ ಹಾಳ್ ಮಾಡ್ಕೊಂಡಿರ್ತೀವಿ. ಎಲ್ಲೋ ಕೆಲವ್ರು ಅದ್ರುಷ್ಟ ಇದ್ದು ತಪ್ಪುಗಳನ್ನ ಸರಿ ಮಾಡ್ಕೊಂಡು ನೆಮ್ದಿ ಇಂದ ಬದುಕ್ತಿದಾರೆ. ಮಿಕ್ ದೋರಲ್ಲಿ ಕೆಲವರು ಸತ್ ಮೇಲೆ ನರಕ ಅನುಭವಿಸ್ ತಿದ್ರೇ ಇನ್ ಕೆಲವರು ಬದ್ಕಿದ್ದಾಗ್ಲೇ ನರಕ ಅನುಭವಿಸ್ ತಿದಾರೆ.
“ಒಂದ್ ಕ್ಷಣ ಮಾತ್ರದ್ ಕೋಪಕ್ಕೆ ನಮ್ lifeನ ಹಾಳ್ ಮಾಡ್ಕೋ ಬೇಕಾ?” ನೀವೆ ಯೋಚ್ನೆ ಮಾಡಿ……