“ಸಂಸಾರವೆಂಬುವ ಸಾಗರದಲ್ಲಿ, ಜೀವನ ಎಂಬ ನೌಕೆಯಲ್ಲಿ ತೇಲುವ ನಾವು, ಸಾಗರದೊಳಗೆ ಜಿಗಿಯುವುದೆ ಮದುವೆ. ನಿನ್ಗೇನ್ ಸಿಗುತ್ತೆ ಅನ್ನೋದು ನಿನ್ ಅದ್ರುಷ್ಟದ್ ಮೇಲೆ depend ಆಗುತ್ತೆ. ನಿನ್ ನಸೀಬ್ ಚನ್ನಗಿದ್ರೆ ಮುತ್ತು (English ನಲ್ pearlಉ ಬೇರೆ ಏನು ಅನ್ಕೋಬೇಡಿ) ಸಿಗುತ್ತೆ ಇಲ್ಲಾಂದ್ರೆ octopus ಒ shark ಒ ಸಿಗುತ್ತೆ” ಇದು ನಾನ್ ಹೇಳಿದಲ್ಲ, just last year ಮದ್ವೆಯಾಗಿದ್ ನನ್ friend ಹೇಳ್ದ. Octopus, shark ಬಗ್ಗೆ ಹೇಳ್ದಾಗ್ ಅವ್ನ್ faceನಲ್ ಇದ್ expression ನೋಡ್ ಅನ್ಕೊಂಡೆ ಅವ್ನಿಗ್ ಮುತ್ ಸಿಗ್ಲಿಲ್ಲ ಅಂತ (ಮತ್ತೆ ತಪ್ ತಿಳ್ಕೋಬೇಡ್ರೀ, ನಾನ್ ಹೇಳಿದ್ದು English Pearlಉ).
ಈಗ್ ಸದ್ಯಕ್ boat ನಲ್ ಹೊಗ್ತಿರೋ ನನ್ನ, ಸಾಗರದಲ್ಲಿ ಯೆಳಿಯೋಕ್ ಸ್ವಲ್ಪ್ ಜನ, boat ನಿಂದ್ ತಳ್ಳೋಕ್ ಸ್ವಲ್ಪ್ ಜನ ಕಾಯ್ತಿದಾರೆ. ನಾನೂ right moment ಸಿಕ್ರೆ ಎಗ್ರೋಣಾ ಅನ್ಕೋತಿನಿ, ಆದ್ರೆ ಸುತ್ತ ಮುತ್ತಲಿನ ಜನ shark ಜೊತೆ ಹೋರಾಡೋದ್ ನೋಡಿ plan postpone ಮಾಡ್ತಿದೀನಿ.
ಈ already ಮದ್ವೆ ಆಗಿರೋರ್ಗೆ, ಇನ್ನೋಬ್ರಿಗ್ ಮದ್ವೆ ಮಾಡೋದ್ ಅಂದ್ರೆ ಏನ್ ಆನಂದನೋ, ಇವ್ನು ಒಳ್ಗೆಳ್ದ್ ನೋಡೋಣ, ಇವ್ನಿಗೇನ್ ಸಿಗುತ್ತೆ ಅನ್ನೋ curiosity ಅನ್ಸುತ್ತೆ, ಅದ್ಕೆ ತಮ್ ಯೆಲ್ಲಾ mainstream ಕೆಲ್ಸಗಳ್ ಜೊತೆಗೆ ತಮಗ್ ಗೊತ್ತಿರೋ contacts ಎಲ್ಲಾ ಜಾಲಾಡ್ತಾರೆ. So as a result of all the external and in-house factors in the midst of all favorable, unfavorable and neutral circumstances start ಆಯ್ತು “ನನ್ ವಧು ಅನ್ವೇಶಣೆ”.
ನಮ್ಮಲ್ಲಿ ಮದ್ವೆ ಅಂದ್ರೆ ಸುಮ್ನೆ ಅಲ್ಲ, ಯಾವ್ದೇ CMM level 5 company ಗಿಂತ ಕಡ್ಮೆ ಇಲ್ಲ process follow ಮಾಡೋದ್ರಲ್ಲಿ.
Step 1: ಜಾತ್ಕ ನೋಡಿ matchmaking
ಇದೆ stepನಲ್ಲೆ ನಮ್ ಹುಡ್ಗರ್ ಆಸೇಗ್ ತಣ್ಣೀರ್ ಬೀಳೋದು, ಜಾತ್ಕ setಆಗ್ದಿರೋ ಹುಡ್ಗೀರೇ ಇಷ್ಟ ಆಗ್ತಾರೆ. ಮನೇವ್ರೋ ಜಾತ್ಕ set ಆಗ್ದೀರೆ ಮದ್ವೆ ಮಾಡೊಲ್ಲ, ಜಾತ್ಕ set ಆಗಿದ್ ಹುಡ್ಗಿ ಇಷ್ಟ ಆಗೋಲ್ಲ.
ಈ ಕನ್ನಡ ಮತ್ತೆ bollywood cinemaಗಳಲ್ಲಿ ಈ “Love at first sight” conceptನ ನೋಡಿ ತಲೆ ಕೆಡಸ್ಕೊಂಡಿರೋ ನಾವು, ನಮ್ ಜೀವ್ನದಲ್ಲೂ ಹಾಗೇ ಆಗುತ್ತೆ ಅಂತ ಒಂದ್ level ನಲ್ expectation ಇಟ್ಕೊಂಡಿರ್ತಿವಿ. ನನ್ caseಉ sameಎ, ಜಾತ್ಕದ main criteria satisfy ಆದ್ಮೇಲೆ next step start ಆಯ್ತು.
Step2: Mutual Interview
ನನ್ನ lifeನ most difficult moments ಎದ್ರಾಗಿದ್ದು ಇಲ್ಲೇ. ನನ್ experience ಹೇಳೋಕಿಂತ ಮುಂಚೆ ನನ್ colleagueನ ಕಥೆ ಹೆಳ್ಲೇ ಬೇಕು.
ಕೆಲ್ವು ತಿಂಗ್ಳಿಂದೆ ನಾನ್ US ಹೋಗಿದ್ದಾಗ, ಅಲ್ಲಿದ್ದ ನನ್ colleague ಒಬ್ಬ, ಮದ್ವೆಗಂತ ತಾನು photos ನೋಡೀ shortlist ಮಾಡಿಟ್ಕೊಂಡಿದ್ದ 5 ಹುಡ್ಗೀರ್ನ ನೊಡೋಕೆ ಅಂತ India ಗೆ ಮೊದಲ್ನೆ ದಂಡಯಾತ್ರೆ ಹೊಡ್ದ.
ಅವ್ನು ಅಲ್ಲಿಂದ ಹೊರಟ್ ತಕ್ಷ್ಣ, ನಾವ್ಗಳು betting start ಮಾಡ್ದ್ವಿ, ಅವ್ನು ಆ 5 ಹುಡ್ಗೀರಲ್ಲಿ ಯಾರನ್ನ ಮದ್ವೆ ಆಗ್ತಾನೆ ಅನ್ನೋದೆ topic of bettingಉ. ಹುಡ್ಗೀರ್ ಹೆಸ್ರನ್ನ ಒನ್ದ್ ಪಟ್ಟಿ ಮಾಡಿ ಆ ಹೆಸರುಗಳಿಗೆ ಒಂದ್ numbering ಕೊಟ್ಟು betting ಮಾಡಿದ್ವಿ.
(Honorable Ladies ಯಾರು ಬೈಕೊ ಬೇಡಿ, ನಮ್ betting ಇದ್ದಿದ್ದು ನಮ್ colleagueನ decision ಮೇಲೆ, ಯಾವ್ ಹುಡ್ಗಿ ಮೇಲಲ್ಲ)
ದಂಡಯಾತ್ರೆ ಮುಗಿಸಿ ಬಂದ ವೀರ, ಎಲ್ರೂ “ಏನಯ್ತೋ? ಯಾರನ್ನ ಮದ್ವೆ ಆಗ್ತಿದೀಯ?” ಅಂತ ಕೇಳಕ್ ಷುರು ಮಾಡಿದ್ರು. (ಅವ್ನು ಯಾರನ್ ಮದ್ವೆ ಆದ್ರೆ ನಂಗೇನು, ನಾವ್ಗಳು betting ಗೆದ್ವ ಅನ್ನೋ ಕುತೂಹಲ ಅಷ್ಟೆ) ಪಾಪ ಅವ್ನು silentಆಗಿ ಎಲ್ರನ್ನೂ ಒಂದ್ ಸರಿ ನೋಡಿ, “ಯಾರನ್ನೂ ಇಲ್ಲ” ಅಂದ. ಎಲ್ರೂ betting ಸೊತ ಬೇಜಾರ್ ನಲ್ಲಿ ಯಾಕೆ ಅಂತ್ಲೂ ಕೇಳ್ಲಿಲ್ಲ. 5ವರಲ್ಲಿ, ಯಾರೂ ಇವ್ನನ್ನ ಮದ್ವೆ ಆಗಲ್ಲ ಅಂದಿದ್ ನಾನು betting ಗೆದ್ ನಾನೂ ಕೂಡ ಅವ್ನ ಪರಿಸ್ತಿತಿ ನೋಡಿ ಸುಮ್ನಾದೆ. ಪಾಪ ಸಿಕ್ಕಾಪಟ್ಟೆ ಆಸೆ ಇಟ್ಕೊಂಡ್ Indiaಗ್ ಹೋಗಿದ್ದ.
ಮುಂದಕ್ ಅವ್ನೇ ಕಥೆ ಷುರು ಮಾಡ್ದ. “5 ಹುಡ್ಗೀರಲ್ಲಿ, ನಂಗೆ ಇಬ್ರು ಇಷ್ಟ ಆದ್ರು, ಆದ್ರೆ ಇಬ್ರು ನನ್ನ ಒಪ್ಲಿಲ್ಲ. ಒಬ್ರು USನಲ್ಲಿರೋ ಹುಡ್ಗರನ್ನ ನಾನ್ ಮದ್ವೆ ಆಗಲ್ಲ, ಅಲ್ ಹೋಗಿ ಏನ್ ಏನ್ ಆಟ ಆಡಿರ್ತಿರೋ ಯಾರಿಗ್ ಗೊತ್ತು ಅಂದ್ರು. ಇನ್ನೊಬ್ರು ನಾನು SAP developer, ನಾನ್ ಮದ್ವೆ ಆಗೋ ಹುಡ್ಗ ಕೂಡ developer ಆಗಿರ್ಬೇಕು ಅಂದ್ರು” ಅಂದ. ಇದ್ನ ಕೇಳಿದ್ ನಾವ್ಗಳು ಉರಿಯೋ ಬೆಂಕಿಗ್ ತುಪ್ಪ ಸುರಿಯೊಂಗೆ ಜೋರಾಗ್ ನಗಕ್ ಶುರು ಮಾಡಿದ್ವಿ.
Now coming back to my story, ಹೀಗೆ ನನ್ನ friends ತಮ್ಗಾದ experiences, happy moments and sad momentsನ ಹೇಳಿದ್ರು. ಅದನ್ನೆಲಾ ಕೇಳಿ mutual interview ಬಗ್ಗೆ ಒಂದ್ levelವರೆಗೂ ತಿಳ್ಕೊಂಡಿದ್ ನಾನು, ನಮ್ಮ screening processನ next stageಗೆ ಬಂದ ಒನ್ದೇ ಒಂದ್ ಹುಡ್ಗಿನ meet ಮಾಡೋಕೆ ನಮ್ family ಜೊತೆ ಹೋದೆ, ಅವ್ರ್ ಮನೆಗೆ. ಆಕೆ ಬಂದ್ ಕೂತ್ಲು, ಅವ್ಳು ನಡ್ಕೊಂಡ್ ಬರ್ಬೇಕಾದ್ರೆ ನಂಗೆ ಒನ್ದ್ doubt ಬಂತು. ನಾವಿಬ್ರು personalಆಗ್ ಮಾತಾಡ್ಲಿ ಅಂತ ದೊಡ್ದೋರೆಲ್ಲಾ decide ಮಾಡಿ ನಮ್ಮಿಬ್ರುನ್ನು “ಮಾಹಡಿ ಮೇಲೆ ಹೋಗ್ ಮಾತಾಡಿ, ಪರ್ವಾಗಿಲ್ಲ” ಅಂದ್ರು.
Personal interview round start ಆಯ್ತು. ನನ್ doubt clear ಮಾಡ್ಕೊಂಡ್ ಬಿಡೊಣ ಅಂತ decide ಮಾಡಿ ಕೇಳ್ದೆ “ನಿಮ್ height ಎಷ್ಟು”, “5.9” ಬಂದ answer. “ನೀವು ನಂಗಿಂತ ಉದ್ದ ಇದೀರ” ಅಂತ ನಗ್ತಾ ಹೇಳ್ದೆ. So that was the end of my 1st mutual interview.
ಅದಾದ್ ಮೇಲೆ ಬಂದಿರೋ all proposalಗಳು round 1ನ ದಾಟ್ಲಿಲ್ಲ.
ಇವಾಗ ನಮ್ parents and relatives effort ಜೊತೆಗೆ ನನ್ ಕೆಲವು friends effort ಕೂಡ ಸೇರಕ್ start ಆಗಿದೆ. ನಾನ್ ಸಮುದ್ರಕ್ ಹಾರ್ದಾಗ ಮುತ್ ಸಿಗ್ಲಿ ಆನ್ನೋ hopeನಲ್ಲಿದಿನಿ ನಾನು.
ಈ ಮದ್ವೆ ಬಗ್ಗೆ ಜನ ಇಷ್ಟೊಂದ್ care ತೊಗೊಂಡ್ arranged marriage ಆದ್ರೂ ನಾನ್ ನೋಡ್ದಂಗೆ ಎಲ್ರೂ “ಆದರ್ಶ ದಂಪತಿಗಳೇ“ನಲ್ಲ, ಹಾಗೆ love marriage ಆಗಿರೋರು ಅಷ್ಟೆ. ಇದ್ನೆಲ್ಲಾ ನೋಡಿದ್ರೆ ನಂಗೆ ಒಂದ್ ಕನ್ನಡ ನಾಟ್ಕದ dialogue ನೆನಪಾಗುತ್ತೆ “Indian marriages race ಇದ್ದಂಗೆ, ಎಷ್ಟೇ ಲೆಕ್ಕಾಚಾರ ಮಾಡಿ ದುಡ್ ಹಾಕಿದ್ರು, ಗೆಲ್ಲೋದು ಅದ್ರುಷ್ಟ ಇದ್ರೆ ಮಾತ್ರ”
ನನ್ lifeನಲ್ಲಿ ಇಷ್ಟೆಲ್ಲಾ circus ನಡೀತಿರ್ಬೇಕಾದ್ರೆ ಕೆಲ್ವುರು ಸಿಕ್ದಾಗ “ಏನಪ್ಪ ಯಾವಾಗ್ ಮದ್ವೆ?” ಅಂತ ಕೇಳ್ತಾರೆ, ಮೊದ್ಲು ಸುಮ್ನೆ ಒನ್ದ್ smile ಮಾಡಿ ಆ questionನ ignoreಮಾಡ್ತಿದ್ ನಾನು, ಇವಾಗ “ನನ್ನ ಮದ್ವೆ ಆಗಕ್ ready ಇರೊ ಹುಡ್ಗಿ ಸಿಕ್ದಾಗ” ಅಂತ ಹೇಳಿ ಅವ್ರ್ questionಗೆ full stop ಹಾಕ್ತಿನಿ.
ಮದ್ವೆ ಎಂಬ lifeನ ಒನ್ದ್ important stepನ ಮಿಕ್ಕಿದ್ process ಬಗ್ಗೆ ಇನ್ನೊಂದ್ article ಬರೀತೀನಿ, ಇದು ನಿಮ್ಗೆ ಇಷ್ಟ ಆದ್ರೆ.
ಮುಖ್ಯವಾದ ಸೂಚನೆ: ಮೇಲೆ ಬರೆದಿರುವ articleನಲ್ಲಿ, ಕೆಲವು ಸನ್ನಿವೇಷಗಳು is result of imagination, ಮಿಕ್ಕಿದ್ದು is result of over exaggeration of others ಸಂಕಟ. ನನ್ life experienceನ ಒಂದ್ angleಇಂದ ಬರದಿದ್ದೀನಿ, just for personal touch”
baha chennagidhe sir..
abhi
nice….
hmmm, I am wondering if someday next year I’ll write a similar story
nice read!
can we turn into a play?
Very nice read !!!